ಹೆಚ್ಚು ಎತ್ತರವಿಲ್ಲದ ಆದರೆ ಬೋಳಾದ ಈ ಬೆಟ್ಟ ನನ್ನನು ಚಿಕ್ಕಂದಿನಿಂದಲೂ ಆಕರ್ಷಿಸಿತ್ತು . ತುಮಕೂರು ನಿಂದ ಬೆಂಗಳೂರಿಗೆ ಪಯಣಿಸುವಾಗ, ಈ ಬೆಟ್ಟವು ಕಂಡು ಹತ್ತಬೇಕು ಎಂಬ ಬಯಕೆ ಉಂಟಾಗುತ್ತಿತ್ತು. ಆದರೆ, ಘಳಿಗೆ ಕೂಡಿ ಬಂದಿದು ಕಳೆದ ಫೆಬ್ರವರಿ ೦೧, ೨೦೧೫ ರ ಭಾನುವಾರ. ಅಂದು ಮಧ್ಯಾಹ್ನ ಬೆಂಗಳೂರಿನಿಂದ ಹೊರಟು ದಾಬಸ್ ಪೇಟೆ ಮಾರ್ಗವಾಗಿ (NH4) ನಿಜಗಲ್ ತಲುಪಿದೆ.
NH4 ನಿಂದಲೇ (ಸರಿಯಾಗಿ ನಿಜಗಲ್ ಬೆಟ್ಟದ ಎದರು) ಈ ಬೆಟ್ಟ ಕಂಡರೂ ಹತ್ತಲು ಸರಿಯಾದ ದಾರಿ ಇರುವುದು ನರಸಿಪುರದ ಕಡೆಯಿಂದ (ದಾಬಸ್ ಪೇಟೆ - ಗೊರವನಹಳ್ಳಿ ರಸ್ತೆ ) ಕಡೆಯಿಂದ. ಆದರೆ ನಾನು ಬೆಟ್ಟ ಹತ್ತಿದ್ದು NH4 ಕಡೆಯಿಂದ.
ನಿಜಗಲ್ ಬೆಟ್ಟದ ಸಮೀಪ ಬಲ ತಿರುವು ಪಡೆದು ಕಿರಿದಾದ ರಸ್ತೆಯಲ್ಲಿ ಚಲಿಸಿ ಬೆಟ್ಟದ ಬುಡ ತಲುಪಿಕೊಂಡೆ. ಈ ರಸ್ತೆ ಸಣ್ಣ ಹಳ್ಳಿಯ ಮುಕಾಂತರ ಹಾದು ದಾಬಸ್ ಪೇಟೆ - ಗೊರವನಹಳ್ಳಿ ರಸ್ತೆಯನ್ನೇ ತಲುಪುತ್ತದೆ. ಹಾಗೆ ಮುಂದೆ ಹೊಗುತ್ತಿರಲು, ಹತ್ತಲು ಸರಿಯಾದ ಮಾರ್ಗ ಕಂಡ ಕೂಡಲೇ ಬೈಕ್ ನಿಲ್ಲಿಸಿ ಬೆಟ್ಟ ಹತ್ತತೊಡಗಿದೆ.
ಬೋಳು ರಾಮದೇವರ ಬೆಟ್ಟ (ನಾನು ಬಲಗಡೆಯಿಂದ ಎಡಕ್ಕೆ ಹತ್ತಿದ್ದು ) |
ಬೆಟ್ಟದ ಕೊನೆಯ ಕಾಲು ಭಾಗ ಕಡಿದಾಗಿದೆ . ಜಾಗರೂಕರಾಗಿ ಬೆಟ್ಟವನ್ನು ಹತ್ತಬೇಕು . ಬೆಟ್ಟದ ಮೇಲೆ ಆತ್ಮಾರಾಮ ದೇವರ ಗುಡಿಯಿದೆ.
ಆತ್ಮಾರಾಮ ದೇವರ ಗುಡಿ |
ಆತ್ಮಾರಾಮ ದೇವರ ಗುಡಿ ಸಮುಚ್ಚಯ |
No comments:
Post a Comment