ಕ್ರಿಸ್ಮಸ್ ಹಬ್ಬದ ಸಲುವಾಗಿ ದೊರೆತ ನಾಲ್ಕು ದಿನಗಳ ರಜೆಯಲ್ಲಿ ಎರಡು ದಿನ ವೃಥಾ ನಿದ್ದೆ ಮಾಡುತ್ತಾ ಕಾಲ ಕಳೆದಿದ್ದೆ. ನನ್ನ ಹೊಸ ಲೆನ್ಸ್ (Tokina 11~16 mm F2.8) ಕೊಂಡು ಎರಡು ತಿಂಗಳುಗಳೇ ಕಳೆದರು ಕೆಲವೇ ಫೋಟೋಗಳನ್ನು ತೆಗೆಯಲು ಸಾಧ್ಯವಾಗಿತ್ತು . ಹೀಗಿರಲು, ನ್ಯಾಷನಲ್ ಜಿಯಾಗ್ರಫಿಯ- Your Shot ನ ಒಂದು ಅಸೈನ್ಮೆಂಟ್ (
"First Light") ನನ್ನ ಗಮನ ಸೆಳೆಯಿತು. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಹಾಗು ಹೊಸ ಲೆನ್ಸ್ ಅನ್ನು ಪರಿಕ್ಷಿಸಲೋಸುಗ, ನಂದಿ ಬೆಟ್ಟಕ್ಕೆ ಹೋಗಿ ಸೂರ್ಯೋದಯದ ಚಿತ್ರಗಳನ್ನು ತೆಗೆಯಲು ಯೋಚಿಸಿದೆ.
ಶನಿವಾರ ಮುಂಜಾನೆಯೇ ಹೊರಟು, ಸೂರ್ಯೋದಯಕ್ಕೆ ಮುನ್ನ ನಂದಿ ಬೆಟ್ಟ ಸೇರಿ, ಸೂರ್ಯೋದಯದ ಚಿತ್ರಗಳನ್ನು ತೆಗೆಯಲು ಹಂಚಕೆ ಹಾಕಿದೆ. ರಸ್ತೆ ಗುರುತು ಹಾಕಿಕೊಂಡು , ಕ್ಯಾಮರ ಬ್ಯಾಗ್ ಸಿದ್ದಪಡಿಸಿ, ೩-೩೦ ಕ್ಕೆ ಅಲಾರಂ ನಿಯೋಜಿಸಿ ಮಲಗಿಕೊಂಡೆ. ಏನೋ ಒಂದು ಪರಿಯ ಉತ್ಸಾಹದಿಂದಾಗಿ ಶುಕ್ರವಾರ ರಾತ್ರಿ ನಿದ್ರೆಯೇ ಬರಲಿಲ್ಲ.
ಶನಿವಾರ (ಡಿಸೆಂಬರ್ ೨೭, ೨೦೧೪) ಬೆಳಗಿನಜಾವ ೪-೧೫ ಕ್ಕೆ ಮನೆ ಬಿಟ್ಟೆ . ಹೆಬ್ಬಾಳ ತಲುಪಿ, ಬೆಂಗಳೂರು - ಹೈದರಾಬಾದ್ ಹೆದ್ದಾರಿ ಹಿಡದೆ . ತುಂಬಾ ಚೆಳಿ ಇತ್ತು. ದಾರಿಯಲ್ಲಿ ಅನೇಕ ತಂಡಗಳು ನಂದಿಯತ್ತ ಹೊರಟಿರುವುದನ್ನು ಕಂಡೆ ಮತ್ತು ಆಶ್ಚರ್ಯಪಟ್ಟೆ .ಚೆಳಿ ಇಂದ ಸ್ವಲ್ಪ ಮುಕ್ತಿ ಪಡೆಯಲು ಕಂಡ ಕಂಡ ಕಡೆ ಚಾ ಕುಡಿದೆ . ಚಾ ಅಂಗಡಿಯವರು ತೆಂಗಿನ ಗರಿಗಳನ್ನು ಉರಿಸಿ ಬೆಂಕಿಯನ್ನು ಮಾಡಿದ್ದರು. ಚಾ ಕುಡಿಯುತ್ತ ಮೈ-ಕೈ ಕಾಯಿಸಿಕೊಂಡೆ .
ಸುಮಾರು ೪೦ ಕಿಲೋ ಮೀಟರ್ ಕ್ರಮಿಸಿದ ನಂತರ ರಾಣಿ ಕ್ರಾಸ್ (ನಂದಿ ಕ್ರಾಸ್ ) ನಲ್ಲಿ ಎಡ ತಿರುವು ಪಡೆದೆ . ನಂತರ ನೆರವಾಗಿ ಚೆಲಿಸಿ ಕಾರೆಹಳ್ಳಿ ಕ್ರಾಸ್ ನಲ್ಲಿ ಎಡ ತಿರುವು ಪಡೆದೆ ಮತ್ತು ನೆರವಾಗಿ ಚೆಲಿಸಿ ನಂದಿ ಬೆಟ್ಟ ಕ್ರಾಸ್ (ನಂದಿ ಪ್ರತಿಮೆ ಹಾಗು ಸೂಚನಾ ಇದೆ ) ನಲ್ಲಿ ಬಲ ತಿರುವು ಪಡೆದೆ . ಇದು ನಂದಿ ಬೆಟ್ಟ ಪ್ರಾರಂಬವಾಗುವ ಸ್ಥಳ. ಸುಮಾರು ೪೦ ತಿರುವುಗಳನ್ನು ಹಾದು ನಂದಿ ಬೆಟ್ಟದ ಪಾರ್ಕಿಂಗ್ ಲಾಟ್ ಅನ್ನು ತಲುಪಿದೆ. ಸಮಯ ಆಗಲೇ ೬-೩೦ ಆಗಿತ್ತು. ಸೂರ್ಯ ಆಗಷ್ಟೆ ಪ್ರಕಟಗೊಂಡಿದ್ದ. ಸಲ್ಪ ನಿರಾಶೆ ಆಯಿತು (ಅರುಣನ ಪ್ರಥಮ ಕಿರಣಗಳು ಇಳೆಯನ್ನು ಸ್ಪರ್ಷಿಸುವಾಗ ಫೋಟೋ ಕ್ಲಿಕ್ಕ್ಕಿಸ ಬೇಕು ಎಂದು ಯೊಜಿಸಿದ್ದೆನಲ್ಲ ಅದಕ್ಕೆ )
ಮತ್ತೂ ಆಶ್ಚರ್ಯವೆಂದರೆ ೫೦೦ ಕ್ಕೂ ಹೆಚ್ಚು ಜನ ಆಗಲೇ ಜಮಾಯಿಸಿದ್ದರು ಹಾಗು ಟಿಕೆಟ್ ( ಪ್ರವೇಶ + ಪಾರ್ಕಿಂಗ್ ) ಪಡೆಯಲು ಬಹಳ ಉದ್ದದ ಕ್ಯೂ ಇತ್ತು . ಇದು ನಿರಾಶೆಯನ್ನು ಇಮ್ಮಡಿಗೊಳಿಸಿತು .( ಬರಿ ಆನ್ಲೈನ್ ನಲ್ಲೆ ಟಿಕೆಟ್ ಖರೀದಿಸಿ, ಕೌಂಟರ್ ನಲ್ಲಿ ಟಿಕೆಟ್ ಪಡೆಯುವ ತಾಳ್ಮೆ ನಶಿಸಿ ಹೋಗಿದೆ ಹಾಗು ಸಮಯ ಮೀರುತ್ತಿರುವುದರಿಂದ ಮತ್ತು ನೆರೆದಿರುವ ಅಪಾರ ಜನಸ್ತೋಮದಿಂದ ನಾನು ಅಂದುಕೊಂಡ ಚಿತ್ರ ತೆಗೆಯಲು ಸದ್ಯವಾಗದು ಎಂದು ಮನಗಂಡು)
ಮನಸಿನಲ್ಲೇ ಬಯ್ದುಕೊಂಡು, ಕ್ಯು ನಲ್ಲಿ ನಿಂತು ಟಿಕೇಟು ಪಡೆದೆ . ಟಿಕೆಟ್ ಪಡೆದು ವ್ಯೂ ಪಾಯಿಂಟ್ ಗೆ ಓಡಿದೆ. ಸಮಯ ಆಗಲೇ ೭-೦೦ ಆಗಿತ್ತು. ನೆರೆದಿದ್ದ ಜನಸ್ತೋಮ ಉದಯಿಸಿದ ಸೂರ್ಯ ಮುಡಿಸಿದ ಚಿತ್ತಾರಗಳನ್ನು ನೋಡಿ ಆನಂದಿಸುತ್ತಿದ್ದರು. ಅದು ಕಣ್ಮನ ತಣಿಸುವ ನೋಟ, ನಾನು ಆನಂದಿಸಿ ಕೆಲವು ಫೋಟೋಗಳನ್ನು ತೆಗೆದೆ.
 |
ಬೆಳಗಿನ ರವಿಯು ಮುಡಿದ ಬಾನಲಿ, ಬೆಳಕಿನ ತೆರೆಯ ಹಾಸಿದ ಬಾಳಲಿ (ಹೃದಯ ಹಾಡಿತು ಚಿತ್ರದ " ನಲಿಯುತಾ " ಹಾಡಿನಿಂದ ಎರವಲು ಪಡೆದಿದ್ದು- ನನ್ನ ಮೆಚ್ಚಿನ ಹಾಡುಗಳಲ್ಲಿ ಒಂದು ) |
|
|
|
|
|
ಬೆಳಕು ಆಗಲೇ ಪ್ರಖರಗೊಂಡು ನೆರಳನ್ನ್ನು ಮೂಡಿಸುತ್ತಿತ್ತು. ಇದನ್ನು ಸೆರೆ ಹಿಡಿಯಲು ಬೆಟ್ಟದ ಇನ್ನೊದು ಬದಿಗೆ (ದಕ್ಷಿಣಕ್ಕೆ ) ಓಡಿದೆ.
 |
ನೆರಳು-ಬೆಳಕು ( ಬಲಗಡೆ ಕಾಣುವ ತುದಿ - ಸ್ಕಂದಗಿರಿ ) |
ಫೋಟೋಗ್ರಫಿ ಸುಬ್ಜೆಕ್ಟ್ಸ್ ಗಾಗಿ ಬೆಟ್ಟದ ತುಂಬಾ ಅಲೆದಾಡಿದೆ. ಅನುರೂಪ ಬಣ್ಣದ ಹಸಿರು -ಹಳದಿ (analogous colour) ನ ಒಂದು ಬಾಗಿಲು ನನ್ನ ಗಮನ ಸೆಳೆಯಿತು .
 |
ಯಾತ್ರಿಕರ ನಿರೀಕ್ಷೆಯಲ್ಲಿ (ಪ್ರವೇಶ ದ್ವಾರ- ನಂದಿ ಬೆಟ್ಟದ ಒಳಗಿಂದ ನೋಡಿದಾಗ) |
|
ಮತ್ತೆ ಪೂರ್ವಕ್ಕೆ ಚಲಿಸುತ್ತಾ ಬೆಟ್ಟವನ್ನು ಏರತೊಡಗಿದೆ. ಅಮೃತ ಸರೋವರ - ವಿಸ್ತಾರವಾದ ಹಾಗು ಪ್ರಶಾಂತವಾದ ಕಲ್ಯಾಣಿ ನನ್ನನು ಆಕರ್ಷಿಸಿತು.
 |
ಪ್ರಶಾಂತತೆ (ಅಮೃತ ಸರೋವರ ) |
ಅಮೃತ ಸರೋವರದ ಕಟ್ಟೆಯ ಮೇಲೆಕಂಡಿದ್ದು
 |
ಮೈತ್ರಿ |
ಪಕ್ಕದಲ್ಲೇ ಇರುವ ನರ್ಸರಿ ಇಂದ ತೆಗೆದ ಹೂವಿನ ಚಿತ್ರ .
 |
ಸುಪ್ತ ಪ್ರಭೆ |
ಮತ್ತೂ ಬೆಟ್ಟವನ್ನು ಏರುತ್ತಿರುವಾಗ, ಬೆಳಕಿನ ಕಿರಣಗಳು ಮರಗಳಿಂದ ತೂರಿಬಂದು ಭೂಮಿಯನ್ನು ಸ್ಪರ್ಶಿಸುತ್ತಿದ್ದವು.
 |
ಸ್ಪರ್ಶ |
ಕಟ್ಟಡಗಳ ಸಂಕೀರ್ಣದಲ್ಲಿರುವ ಪಾಳು ಬಿದ್ದ ಕಟ್ಟಡ .
 |
ಪರಿತ್ಯಕ್ತ |
ಗೆಸ್ಟ್ ಹೌಸ್ : ನೆಹರು ಭವನ. ಪಾರಂಪರಿಕ ಕಟ್ಟಡ . ೧೯೮೬ ರ ಸಾರ್ಕ್ ಸಮ್ಮೇಳನ ಇಲ್ಲಿ ನಡೆದಿತ್ತು.
 |
ನೆಹರು ಭವನ (ಪಬ್ಲಿಕ್ ಗೆಸ್ಟ್ ಹೌಸ್) |
ಹಳೆಯ ಕಟ್ಟಡದ ಒಳಗಿನ ಚಿತ್ರ (ಶ್ರೀ ಯೋಗನಂದಿಶ್ವರ ದೇವಸ್ಥಾನದ ಬದಿಯ ಸಾಲು ಕಟ್ಟಡಗಲಿಂದ)
 |
ಹಳತು |
ಶ್ರೀ ಯೋಗನಂದಿಶ್ವರ ದೇವಸ್ಥಾನ-ಕಲ್ಯಾಣಿ
 |
ಶ್ರೀ ಯೋಗನಂದಿಶ್ವರ ದೇವಸ್ಥಾನ-ಕಲ್ಯಾಣಿ |
 |
ಮೂರು ಆಯಾಮಗಳು |
ವ್ಯೂ ಪಾಯಿಂಟ್ (ಟಿಪ್ಪು ಡ್ರಾಪ್ ಸಮೀಪ )
 |
ಇಳಿಜಾರು (ವ್ಯೂ ಪಾಯಿಂಟ್ - ಟಿಪ್ಪು ಡ್ರಾಪ್ ಸಮೀಪ ) |
ಟಿಪ್ಪುವಿನ ಬೇಸಿಗೆ ಅರಮನೆ
 |
ಟಿಪ್ಪುವಿನ ಬೇಸಿಗೆ ಅರಮನೆ |
ನೆಲ್ಲಿಕಾಯಿ ಬಸವಣ್ಣ, ಪಾಲಾರ್ ನದಿ ಮೂಲ, ಟಿಪ್ಪು ಡ್ರಾಪ್ , ಮತ್ತು ಅರ್ಕಾವತಿ ನದಿ ಮೂಲಗಳನ್ನು ಸಂದರ್ಶಿಷಿ ಹೋಟೆಲ್ ಗೆ ಉಣ್ಣಲು ಹೊರಟೆ. ಮಯೂರ ಹೋಟೆಲ್ ನಲ್ಲಿ ಖಾರಭಾತ್ ತಿಂದು ನಂದಿ ಗ್ರಾಮಕ್ಕೆ ಹೊರಟೆ.
ಶ್ರೀ ಭೊಘನನ್ದಿಶ್ವರ ದೇವಾಲಯ- ನಂದಿಗ್ರಾಮ
ನಂದಿ ಬೆಟ್ಟದ ಕ್ರಾಸ್ ನಲ್ಲಿ ಬಲ ತಿರುವು ಪಡೆದು ೩ ಕಿಲೋ ಮೀಟರ್ ಚಲಿಸಿ ನಂದಿ ಗ್ರಾಮವನ್ನು ತಲುಪಿದೆ . ಈ ರಸ್ತೆ, ಕಣಿವೆ ರಸ್ತೆಯಾಗಿದ್ದು ವಿಶಿಷ್ಟ ಅನುಭವ ನೀಡಿತು. ನಂದಿ ಗ್ರಾಮದ ಶ್ರೀ ಭೊಘನನ್ದಿಶ್ವರ ದೇವಾಲಯವನ್ನು ವೀಕ್ಷಿಸಿ ಬಹಳ ಆನಂದಪಟ್ಟೆ. ಇದು ಕರ್ನಾಟಕದ ಪ್ರಾಚಿನ ದೇವಾಲಯಗಲ್ಲೊಂದು (೯ ನೇ ಶತಮಾನ ). ದೇವಾಲಯ ಗಂಗ, ಚೋಳ ಹಾಗು ಹೊಯ್ಸಳ ಶೈಲಿಯನ್ನು ಹೊಂದಿದೆ. ದೇವಾಲಯದ ಮುಖ್ಯ ಮಂಟಪದ ಕಂಬದ ಕೆತ್ತನೆಗಳು ಅದ್ಭುತವಾಗಿದೆ. ಇವು ಬೇಲೂರು - ಹಳೇಬೀಡು ದೇವಾಲಯದ ಕೆಟ್ಟನೆಗಳನ್ನು ಹೋಲುತ್ತವೆ. ಮುಖ್ಯ ಮಂಟಪದಲ್ಲಿಯೇ ಮನೋಹರವಾದ ಕಲ್ಲಿನ ಛತ್ರಿ ಇದೆ. ಸುಂದರ ಕೆತ್ತನೆಗಳು (ಕಿಟಕಿಗಳನ್ನು ಅಲಂಕರಿಸಲು ) ಹಾಗು ಗಿರಿಜಾ ಕಲ್ಯಾಣ ದ ಕೆತ್ತೆನೆ ದೇವಾಲಯದ ಮತ್ತೊಂದು ಆಕರ್ಷಣೆ.
 |
ಶಿಲೆಯಲ್ಲ ವೀ ಗುಡಿಯು ಕಲೆಯ ಬಲೆಯು- ಕುವೆಂಪು |
 |
ಕಲ್ಲಿನ ಛತ್ರಿ |
 |
ಶ್ರೀ ಭೊಘನನ್ದಿಶ್ವರ ದೇವಾಲಯ |
 |
ಶ್ರೀ ಭೊಘನನ್ದಿಶ್ವರ ದೇವಾಲಯ |
ದೇವಸ್ತಾನದ ಇನ್ನೊದು ಪ್ರಕಾರದಲ್ಲಿ ಕಲ್ಯಾಣ ಮಂಟಪ ಹಾಗು ವಿಶಾಲವಾದ ಕಲ್ಯಾಣಿ ಇದೆ.
 |
ಶ್ರೀ ಭೊಘನನ್ದಿಶ್ವರದೇವಾಲಯದ ಕಲ್ಯಾಣಿ |
 |
ಶ್ರೀ ಭೊಘನನ್ದಿಶ್ವರದೇವಾಲಯದ ಕಲ್ಯಾಣಿ |
ಒಟ್ಟಾರೆ ಈ ಬೈಕ್ ಸವಾರಿ ಹಾಗು ಫೋಟೊಗ್ರಫಿ ಅದ್ಬುತ ಅನುಭವವನ್ನು ನೀಡಿತು. ಖುಷಿಯಾಗಿ ಮನೆಗೆ ಹೊರಟೆ.